ಕಪ್ಪು ಮುತ್ತು ಮತ್ತು ಇತರ ಕಥೆಗಳು
ಕಪ್ಪು ಮುತ್ತು ಮತ್ತು ಇತರ ಕಥೆಗಳು
ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಅನ್ನು ತಾತಾ ವಿಜ್ಞಾನ ಮಂದಿರ, ಬೆಂಗಳೂರಿನಲ್ಲೂ ಎಂ.ಎಸ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಅನ್ನು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲೂ ಮಾಡಿರುವ ಆಂಡಾಳ್ ಶರ್ಮ ಅವರು ನುರಿತ ಲೇಖಕಿ.
ಅವರ ಕಥೆಗಳಲ್ಲಿ ಕಾಣುವುದು ಬದುಕಿನ ನೈಜ ಚಿತ್ರಣವನ್ನು. ಪಾತ್ರಗಳು ಪರಸ್ಪರ ಸ್ಪಂದಿಸುವ ರೀತಿ ವಿಶಿಷ್ಟ ಎನಿಸುವಂತದ್ದು. ಸರಳವಾಗಿ ಓದಿಸಿಕೊಂಡು ಹೋಗುವ ಶೈಲಿ, ಶೈಲಿಗೆ ತಕ್ಕಂತೆ ಒಪ್ಪುವ ಭಾಷೆ ಕಥೆಗಳಲ್ಲಿ ಇವೆ.
ಪತಿ ರಾಜಿಂದೆರ್ ಕುಮಾರ್ ತಾತಾ ವಿಜ್ಞಾನ ಮಂದಿರದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿದ್ದರು. ಇಬ್ಬರು ಮಕ್ಕಳು ಇರುವ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದಾರೆ.
ಲೇಖಕಿಯ ಸಂಪರ್ಕ : andalsharma.blr@gmail.com